ಸಮರ್ಥ ಚಿತ್ರಕ್ಕೆ ಚಾಲನೆ
Posted date: 25 Sat, Jun 2016 – 10:20:00 AM

ನೀನಿಲ್ಲದ ಮಳೆ ಸಿನಿಮಾದ ಹೀರೋ ಅಮೋಘ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವರೆಗೆ ಅಮೋಘ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಬಹುತೇಕ ಚಿತ್ರಗಳು ವಿದೇಶಗಳಲ್ಲಿ ಚಿತ್ರೀಕರಣಗೊಂಡಿವೆ.
    ಈಗ ‘ಸಮರ್ಥ’ ಎನ್ನುವ ಹೊಸ ಚಿತ್ರ ಆರಂಭವಾಗಿದೆ. ಮೂವರು ನಾಯಕಿಯರಿರುವ ಈ ಚಿತ್ರದಲ್ಲಿ ಅಮೋಘ್ ಒಬ್ಬರೇ ಹೀರೋ. ಭಾರತದ ಸಂಪ್ರದಾಯ, ಕಲಾಚಾರ, ಇಲ್ಲಿನ ಧಾರ್ಮಿಕತೆ, ಸಂಸ್ಕೃತಿಯನ್ನು ಅತಿಯಾಗಿ ಪ್ರೀತಿಸುವ ಎನ್‌ಆರ್‌ಐ ಯುವತಿ ಅಧ್ಯಯನಕ್ಕಾಗಿ ಇಂಡಿಯಾಗೆ ಬರುತ್ತಾಳೆ. ನಾಗರೀಕತೆಯೇ ಇಲ್ಲದ, ನಡೆದದ್ದೇ ದಾರಿ ಎಂದು ತಿಳಿದ ಪರಮ ಒರಟನೊಬ್ಬ ಆಕೆಗೆ ಎದುರಾಗುತ್ತಾನೆ. ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಆ ಯುವತಿ ನಾಯಕನನ್ನು ವಿದೇಶಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತಾಳೆ.. ಕಥೆ ಇಂಡಿಯಾದಿಂದ ಅಮೆರಿಕಕ್ಕೆ ರವಾನೆಯಾಗುತ್ತದೆ. ಇಡೀ ಸಿನಿಮಾದಲ್ಲಿ ಮಾಸ್ ಎಲಿಮೆಂಟುಗಳ ಜೊತೆಜೊತೆಗೇ ಹಾಸ್ಯಮಯವಾಗಿ ರೂಪಿಸಲಿದ್ದಾರಂತೆ.
    ಈ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಕ್ಯಾಲಿಫೋರ್ನಿಯಾ ಸೇರಿದಂತೆ ಇನ್ನಿತರ ಕಡೆ ತೆರಳಲಿದೆ. ಸುಮಾರು ೨೫೦ಜನ ವಿದೇಶೀ ಕಲಾವಿದರನ್ನು ಬಳಸಿಕೊಂಡು ವಿನೂತನವಾದ ಹಾಡಿನ ಚಿತ್ರೀಕರಣ ಕೂಡಾ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ.
ಶೀನ್ ಲೀಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲೀಜಾ ಡೆನ್ನಿಸ್, ಜೋಸ್ ಫ್ರಾನ್ಸಿಸ್ ಮ್ತು ಅಲ್‌ಮೆಡಾ ಟಿಟುಸ್ ನಿರ್ಮಾಪಕರಾಗಿರುವ ‘ಸಮರ್ಥ’ ನಿರ್ಮಾಣಗೊಳ್ಳುತ್ತಿದೆ. ರಾಜೇಶ್ ರಾಜು ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್. ಪ್ರದೀಪ್ ವರ್ಮಾ ಸಂಗೀತ ನೀಡುತ್ತಿದ್ದಾರೆ. ಎರಲ್‌ಫ್ಲೈನ್ ಛಾಯಾಗ್ರಹಣವಿದೆ.
    ಅಮೋಘ ನಾಯಕನಾಗಿರುವ ‘ಸಮರ್ಥ’ ಚಿತ್ರದಲ್ಲಿ ಬಿಂಬಿಕಾ ಮತ್ತು ಕಾವ್ಯ ಇಬ್ಬರು ನಾಯಕಿಯರಿದ್ದಾರೆ. ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed